Back
ಜಿಲ್ಲೆಯ ಪರಿಚಯ:

 

ತುಮಕೂರು ಜಿಲ್ಲೆಯು ಕೇಂದ್ರ ಸ್ಥಳವಾಗಿದ್ದು , ಇದೇ ಹೆಸರಿನಿಂದ ಜಿಲ್ಲೆಯನ್ನು ನಾಮಕರಣ ಮಾಡಲಾಗಿದೆ. ಇಲ್ಲಿಯ ಜನರ ಅಭಿಪ್ರಾಯದಲ್ಲಿ ಪ್ರಸ್ತುತ ಜಿಲ್ಲೆಯು ಹಿಂದೆ ಬೇರೊಂದು ಆಳ್ವಿಕೆಯ ಭಾಗವಾಗಿದ್ದು ಅದರ ರಾಜಧಾನಿಯು ಕೃದಾಪುರ-ಈಗಿನ ಕೈದಾಳವಾಗಿತ್ತು ಮತ್ತು ಇದನ್ನು ಆಗಿನ ಅರಸರುಗಳು ತಮ್ಮ ಸಂಸ್ಥಾನದಲ್ಲಿದ್ದ ತಮಟೆ ಒಡೆಯುವವರೆಗೆ ಬಹುಮಾನವಾಗಿ ನನೀಡಲಾಗಿತ್ತೆಂದು ಹೇಳುತ್ತಾರೆ. ತುಮುಕೆ ಎಂದರೆ ಅದು ವಾಧ್ಯದ ಉಪಕರಣವಾಗಿದ್ದು ಅದನ್ನು ಊರಿನಲ್ಲಿ ಡಂಗೂರ ಸಾರುವಾಗ ಉಪಯೋಗಿ ಸುತ್ತಿದ್ದು ಅದಕ್ಕಾಗಿ ಈ ಪ್ರದೇಶವನ್ನು `ತುಮುಕೆ -ಊರು` ಎಂದು ಕರೆಯಲಾಗಿ , ಇದು ತಮಟೆ ಒಡೆಯುವವರಿಗೆ ಸೇರಿತ್ತೆಂಬುದನ್ನು ಸೂಚಿಸುತ್ತದೆ. ಆದರೆ 10ನೇ ಶತಮಾನದಲ್ಲಿ ಈ ಸ್ಥಳದ ಮೂಲ ಹೆಸರು ತುಮ್ಮೆಗೂರು ಎಂತಲೂ ಈ ಸ್ಥಳದಲ್ಲಿ ತುಂಬೆ ಹೂವು ಸಾಕಷ್ಟು ಪ್ರಮಾಣದಲ್ಲಿ ಇದ್ದಿರಬಹುದೆಂದು ತಿಳಿಯುತ್ತದೆ. ಈಗಿನ ತುಮಕೂರನ್ನು ಕಂಟೇ ಅರಸು ಎಂಬುವವನು ಕಟ್ಟಿದನೆಂದು ಆತನು ಮೈಸು ಮಹಾರಾಜರ ಮನೆತನಕ್ಕೆ ಸೇರಿದವನೆಂದು ಮತ್ತು ಈ ಸ್ಥಳವನ್ನು ತುಮ್ಮೆ -ಊರು ಅಥವಾ ತುಂಬೆವೂರು ಎಂದು ಕರೆಯುತ್ತಿರಲಾಗಿ ಕಾಲಾನುಕ್ರಮದಲ್ಲಿ ತುಮಕೂರು (ಆಂಗ್ಲ ಭಾಷೆಯಲ್ಲಿ ತುಮಕೂರು) ಎಂದು ಕರೆಯಲಾಗುತ್ತಾ ಬಂದಿದೆ.

ಸ್ಥಳ:

ತುಮಕೂರು ಜಲ್ಲೆಯು ಬಯಲು ಪ್ರದೇಶವನ್ನು ಹೊಂದಿರುವಂತಹ ಜಿಲ್ಲೆಗಳ ಗುಂಪಿನಲ್ಲಿ ಸೇರಿರುತ್ತದೆ. ಇದು ರಾಜ್ಯದ ಕೇಂದ್ರ ಭಾಗದ ಪಶ್ಚಿಮಕ್ಕಿದ್ದು , ಚಿತ್ರದುರ್ಗ ದಕ್ಷಿಣಕ್ಕೂಮ ದಕ್ಷಿಣ ಪಶ್ಚಿಮಕ್ಕೂ ಹರಡಿಕೊಂಡಿರುತ್ತದೆ.

ಜಿಲ್ಲೆಯ ಉತ್ತರ ಭಾಗಕ್ಕೆ ಅನಂತಪುರ ಜಿಲ್ಲೆಯು , ಪೂರ್ವಕ್ಕೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ದಕ್ಷಿಣಕ್ಕೆ ಮಂಡ್ಯ ಜಿಲ್ಲೆ ಮತ್ತು ಪಶ್ಚಿಮದಲ್ಲಿ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳನ್ನು ಹೊಂದಿರುತ್ತದೆ.

ಜಿಲ್ಲೆಯ ಮತ್ತೊಂದು ವೈಶಿಷ್ಟ ಎಂದರೆ ಜಿಲ್ಲೆಗೆ ಸೇರಿದಂತಹ ಪಾವಗಡ ತಾಲ್ಲೂಕು ಜಿಲ್ಲೆಯ ಬೇರೆ ಯಾವುದೇ ಭಾಗಕ್ಕೂ ಹೊಂದಿಕೊಂಡಿರುವಂತಿಲ್ಲ. ಈ ತಾಲ್ಲೂಕು ನೆರೆಯ ಆಂದ್ರ ಪ್ರದೇಶದ ಅನಂತ ಪುರ ಜಿಲ್ಲೆಯಿಂದ ಸುತ್ತುವರೆದಿದ್ದು, ಉತ್ತರ-ಪಶ್ಚಿಮ ದಿಕ್ಕಿನಲ್ಲಿ ಕರ್ನಾಟಕದೊಂದಿಗೆ ಸೇರಿಕೊಂಡಿದೆ.

ಹಿನ್ನೆಲೆ ಮತ್ತು ಸಂಕ್ಷಿಪ್ತ ಪ್ರಾಂತೀಯ ಇತಿಹಾಸ:

ಬಹಳ ಹಿಂದೆ ಅಂದರೆ 5 ರಿಂದ 10 ನೇ ಶತಮಾನದವರೆಗೆ ಈ ಪ್ರಾಂತ್ಯದ ಬಹುತೇಕ ಭಾಗವು ಗಂಗರ ಒಡೆತನದಲ್ಲಿದ್ದುದರಿಂದ ಗಂಗವಾಡಿಗೆ ಸೇರಿತ್ತು. ಜಿಲ್ಲೆಯ ಉತ್ತರ-ಪಶ್ಚಿಮ ಭಾಗವು 1- ರಿಂದ 11ನೇ ಶತಮಾನದವರೆಗೆ ನೊಳಂಬವಾಡಿಗೆ ಸೇರಿದ್ದು ನೊಳಂಬರಿಂದ ಆಳಲ್ಪಟ್ಟಿದ್ದು ಇವರು ಈಗಿನ ಮಡಕಶಿರಕ್ಕೆ ಹೊಂದಿಕೊಂಡಂತೆ ಇರುವ ಹಂಜೇರನ್ನು, ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. 11ನೇ ಶತಮಾನದಲ್ಲಿ ಗಂಗ ಮತ್ತು ನೊಳಂಬ ಅರಸು ಕುಟುಂಬಗಳ ನಡುವೆ ವೈವಾಹಿಕ ಸಂಬಂಧಗಳು ಏರ್ಪಟ್ಟಿತ್ತು. ನೊಳಂಬ ರಾಜ ಜಯಬ್ಬೆಯನ್ನು ವಿವಾಹವಾದ ನಂತರ ಶಿರಾ ಪ್ರಾಂತ್ಯದ ತನ್ನ ಮಹಾರಾಣಿಯರಿಗೆ ಕೆಲವೊಂದು ಹಳ್ಳಿಗಳಿಗೆ ನೇಮಿಸಿದರು. ಆ ನಂತರ ಹೊಯ್ಸಳರು ಈ ಪ್ರಾಂತ್ಯವನ್ನು ಸಂಪೂರ್ಣವಾಗಿ ಆಳಲಾರಂಬಿಸಿದರು. 14ನೇ ಶತಮಾನದಲ್ಲಿ ಇದು ವಿಜಯನಗರದ ದೊರೆಗಳಿಂದ ಆಳಲ್ಪಟ್ಟಿತು. ಈ ಪ್ರಾಂತ್ಯದಲ್ಲಿ ಅನೇಕ ಚಿಕ್ಕ ಚಿಕ್ಕ ರಾಜ್ಯಗಳು ಅಸ್ತಿತ್ವದಲ್ಲಿದ್ದವು,. ಉದಾಹರಣೆಗೆ ಹಾಗಲವಾಡಿ, ಹೊಳವನಹಳ್ಳಿ, ಮಧುಗಿರಿ ಮತ್ತು ನಿಢುಗಲ್. ಆದರೆ ವಿಜಯಪುರದ ಸುಲ್ತಾನರು ದಂಡೆತ್ತಿ ಬಂದ ನಂತರ ಈ ಚಿಕ್ಕರಾಜ್ಯಗಳ ಒಡೆಯರುಗಳನ್ನು ಹೊಡೆದೋಡಿದಿ ರಾಜ್ಯದ ುತ್ತರ ಭಾಗವನ್ನು ಸಂಪೂರ್ಣವಾಗಿ ಆದಿಲ್ ಶಾಹಿ ಆಡಳಿತಕ್ಕೆ ಒಳಪಟ್ಟಿತ್ತು. ಮೊಘಲರ ಗೋಲ್ಕೊಂಡ ಮತ್ತು ಈಗಿನ ವಿಜಯಪುರವನ್ನು ವಶಪಡಿಸಿಕೊಂಡ ನಂತರ ಶಿರಾವನ್ನು ಒಂದು ಪ್ರತ್ಯೇಕ ಪ್ರಾಂತ್ಯವನ್ನಾಗಿ ಮಾಡಿದರು. ಜಿಲ್ಲೆಯ ದಕ್ಷಿಣದ ಪ್ರದೇಶಗಳನ್ನು ಮೈಸೂರು ದೊರೆಗಳು ವಶಪಡಿಸಕೊಂಡು ಚಿಕ್ಕದೇವರಾಜ ೊಡೆಯರವರು ಆಳ್ವಿಕೆ ಮಾಡಿದರು. ಹೀಗೆ 17ನೇ ಶತಮಾನದ ಅಂತ್ಯದ ವೇಳೆಗೆ ಜಿಲ್ಲೆಯ ದಕ್ಷಿಣ ಭಾಗವನ್ನು ಮೈಸೂರಿನ ಅರಸರು ಆಳುತ್ತಿದ್ದರು. 1761 ರಲ್ಲಿ ಹೈದರ್ ಆಲಿಯ ಆಕ್ರಮಣದಿಂದ ಇನ್ನುಳಿದ ಪ್ರದೇಶಗಳು ಮೈಸೂರಿನ ಆಳ್ವಿಕೆಗೆ ಒಳಪಟ್ಟಿತ್ತು.

ಟಿಪ್ಪುವಿನ ನಂತರ ಈ ಪ್ರಾಂತ್ಯವನ್ನು ಮೈಸೂರಿನ ಅರಸರು ಮತ್ತೆ ಮರಳಿ ಪಡೆದರು. ಕೃಷ್ಣರಾಜ ಒಡೆಯರ್ = 111 (1811-31)ರ ಅವಧಿಯಲ್ಲಿ ಇದು ಮಧುಗಿರಿ ಪೌಜುದಾರಿಗೆ ಸೇರಿದ್ದಿತು,.ಆ ನಂತರ ತುಮಕೂರನ್ನು ಚಿತ್ರದುರ್ಗ ಪ್ರಾಂತ್ಯದೊಂದಿಗೆ ವಿಲೀನಗೊಳಿಸಿ ತುಮಕೂರನ್ನು ಕೇಂದ್ರ ಸ್ಥಾನವನ್ನಾಗಿ ಮಾಡಲಾಯಿತು.

ಜಿಲ್ಲೆಯ ಭೌಗೋಳಿಕ ಭಾಗಗಳು;

ಬಹಳ ಹಿಂದಿನಿಂದಲೂ ತುಮಕೂರು ಜಿಲ್ಲೆಯು ವಿವಿಧ ಹಂತದ ಸ್ಥಳೀಯ ಸರ್ಕಾರವನ್ನು ನೀಡುವಲ್ಲಿ ಅನೇಕ ಬದಲಾವಣೆಗಳನ್ನು ಕಂಡಿತು. ಬ್ರಿಟಿಷ್ ಆಳ್ವಿಕೆಯಲ್ಲಿ ಈ ಸರ್ಕಾರಗಳ ರಚನೆ ಮತ್ತು ಕಾರ್ಯವೈಖರಿಯಲ್ಲಿ ಬದಲಾವಣೆಗಳನ್ನು ತರಲಾಯಿತು. 1992 ರಲ್ಲಿ ರೂಪಿತವಾದ 72 ಮತ್ತು 73ನೇ ಸಂವಿಧಾನಾತ್ಮಕ ತಿದ್ದುಪಡಿ ಅನ್ವಯ ರಾಜ್ಯ ಸರ್ಕಾರವು ಮೂರ ರೀತಿಯಾದ ಸರ್ಕಾರಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ರೂಪಿಸಿತು.

ಈಗಿನ ಸ್ಥಿತಿ:

ಜಿಲ್ಲೆಯಲ್ಲಿ ಹತ್ತು ತಾಲ್ಲೂಕುಗಳಿದ್ದು ಇವುಗಳನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಮೂರು ಕಂದಾಯ ಉಪ ವಿಭಾಗಗಳಾಗಿ ವಿಂಗಡಿಸಲಾಗಿದೆ,: ತುಮಕೂರು, ತಿಪಟೂರು ಮತ್ತು ಮಧುಗಿರಿ, ಜಿಲ್ಲೆಯಲ್ಲಿ ಹತ್ತು ನಗರಸಭೆ/ಪುರಸಭೆ ಗಳಿರುತ್ತವೆ. ಮತ್ತು 321 ಗ್ರಾಮ ಪಂಚಾಯತಿಗಳಿವೆ. ಜಿಲ್ಲೆಯಲ್ಲಿ ಒಟ್ಟು 2574 ಜನವಸತಿ ಇರುವ ಗ್ರಾಮಗಳು ಇವೆ.

ಜಿಲ್ಲೆಯ 2011ನೇ ಸಾಲಿನ ಜನಗಣತಿ ಪ್ರಕಾರ 10,597 ಚ.ಕಿ.ಮೀ. ಗಳಿದ್ದು, 26,78,980 ರಷ್ಟು ಜನಸಂಖ್ಯೆಯನ್ನು ಹೊಂದಿದೆ. ವಿಸ್ತೀರ್ಣ ಮತ್ತು ಜನಸಂಖ್ಯೆ ಎರಡರಲ್ಲೂ ರಾಜ್ಯದಲ್ಲಿ ತುಮಕೂರು ಜಿಲ್ಲೆಯ 4ನೇ ಸ್ಥಾನವನ್ನು ಪಡೆದಿದೆ. ಜಿಲ್ಲೆಯಲ್ಲಿನ ಹತ್ತು ತಾಲ್ಲೂಕುಗಳಲ್ಲಿ , ಶಿರಾ ತಾಲ್ಲೂಕು 1552 ಚ.ಕಿ.ಮೀ.ಗಳಿದ್ದು 313614 ಗಳಷ್ಟು ಜನಸಂಖ್ಯೆಯನ್ನು ಹೊಂದಿ ಅತಿ ದೊ ಡ್ಡತಾಲ್ಲೂಕಾಗಿರುತ್ತದ. ೆನಂತರದಲ್ಲಿ ಪಾವಗಡ (1358) ಗುಬ್ಬಿ (1221) ಮಧುಗಿ ರಿ (1131) , .ಚಿ..ನಾ.ಹಳ್ಳಿ (1113) ತುಮಕೂರು (1026) , ಕುಣಿ ಗಲ್ (981) , ತಿಪಟೂರು (785) , ತುರುವೇಕೆ ರೆ(778) ಆಗಿದ್ದು ಕೊರಟಗೆರ ೆತಾಲ್ಲೂ ಕು ಅತಿ ಸಣ್ಣ ತಾಲ್ಲೂಕಾಗಿದ್ದು ಇದರ ವಿಸ್ತೀರ್ಣವ ು652 ಚ.ಕಿ.ಮೀ.ಗಳಾಗಿರುತ್ತದೆ. .

×
ABOUT DULT ORGANISATIONAL STRUCTURE PROJECTS