Back
ಪ್ರವಾಸಿ ತಾಣಗಳು - ತುಮಕೂರು ಜಿಲ್ಲೆ

ತುಮಕೂರಿನ  ಪ್ರಸಿದ್ಧ ಮತ್ತು ಧಾರ್ಮಿಕ ಪ್ರವಾಸಿ ಸ್ಥಳಗಳು
ತುಮಕೂರು ಜಿಲ್ಲೆ ಅಮೂಲ್ಯವಾದ (ಭೂಮಿ) ಸ್ಥಳ ರಾಮಾಯಣ ಕಾಲದಲ್ಲಿ ಶ್ರೀ ರಾಮಚಂದ್ರ, ಲಕ್ಷ್ಮಣ, ಸೀತೆ ಕೆಲ ಕಾಲ ದೇವರಾಯನದುರ್ಗ ಕಾಡಿನಲ್ಲಿ ವನವಾಸ ಕಳೆದರು ಎಂಬುದು ಪುರಾಣದಲ್ಲಿದೆ. ಇಲ್ಲಿ ತುಂಬ ದೇವಸ್ಥಾನ,ಕೋಟೆ, ಪ್ರಸಿದ್ಧವಾದ ಸ್ಥಳಗಳಿವೆ  ತುಮಕೂರು ಜಿಲ್ಲೆಯು ಒಟ್ಟಾರೆ 10,598 ಚ.ಕ.ಮಿ.ಯಲ್ಲಿದೆ. ತುಮಕೂರು ಜಿಲ್ಲಯ ಪ್ರತಿವೊಂದು ತಾಲ್ಲೂಕು ಮತ್ತು ಗ್ರಾಮಗಳು ತನ್ನೇದೆಯಾದ ಒಂದು ಇತಿಹಾಸ ಲಗತ್ತು ಇರುತ್ತದೆ.

ಶ್ರೀ ಸಿದ್ಧಗಂಗಾ ಮಠ ಶ್ರೀ ಸಿದ್ಧಗಂಗಾ ಮಠ


ಶ್ರೀ ಸಿದ್ದಗಂಗಾ  ಮಠ ತುಮಕೂರು ನಗರದಿಂದ ಸುಮಾರು ಆರು ಕಿಲೋಮೀಟರುಗಳ ದೂರದಲ್ಲಿದೆ. ಹತ್ತಿರವೆಂದರೆ  ಕ್ಯಾತಸಂದ್ರ ರೈಲು ನಿಲ್ದಾಣದಿಂದ ಅರ್ಧ ಕಿ.ಮಿ. ದೂರವಿದೆ. ಶ್ರೀಸಿದ್ಧಗಂಗ ಮಠ ತುಮಕೂರು ಮತ್ತು ಬೆಂಗಳೂರಿನ ಬಸ್ಸುಗಳಿಗೆ ಸುಲಭವಾಗಿ ಸಂಪರ್ಕವಿರುತ್ತದೆ. ಅನ್ನ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ಇದ್ದು, ಇದೇ ಕಾರಣದಿಂದ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿದೆ. ಸುಮಾರು ಆರು ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿದೆ.

ಕರ್ನಾಟಕ ರತ್ನ ಪ್ರಶಸ್ತಿಯನ್ನು ಡಾ||ಶ್ರೀ ಶಿವಕುಮಾರ ಸ್ವಾಮಿಗಳವರಿಗೆ ನೀಡಲಾಗಿದೆ. ಶ್ರೀ ಕ್ಷೇತ್ರದ ಮಠಾಧಿಪತಿಗಳು ಡಾ|| ಶ್ರೀ ಶಿವಕುಮಾರ ಸ್ವಾಮಿಗಳು. ಕಿರಿಯ ಸ್ವಾಮಿಜಿ ಶ್ರೀ ಸಿದ್ದಲಿಂಗಸ್ವಾಮಿಗಳು ಕ್ಷೇತ್ರದ ಹಿಂದಿನ ಮಠಾಧಿಪತಿಗಳು ಶ್ರೀಉದ್ದಾನ ಶಿವಯೋಗಿಗಳು. ಇವರು ಎಡೆಯೂರು ಸಿದ್ಧಲಿಂಗೇಶ್ವರರ ಶಿಷ್ಯಪರಂಪರೆಗೆ ಸೇರಿದವರಾಗಿದ್ದಾರೆ.

ಕ್ಷೇತ್ರದ ಪ್ರಮುಖ ದೇವಸ್ಥಾನಗಳು: ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ, ಶ್ರೀ ಸಿದ್ದಗಂಗಾ ಮಾತೆ ದೇವಸ್ಥಾನ.

ಶಿರಾ ಶಿರಾ

ಶಿರಾ ಟೌನ್ ತುಮೂಕೂರು ನಿಂದ  ಸುಮಾರು 50 ಕಿ.ಮಿ. ದೂರದಲ್ಲಿದೆ.  ಶಿರಾ ಟೌನ ಅನ್ನು ರಂಗಪ್ಪನಾಯಕ್ ನವರು ಸ್ಥಾಪಿಸಿದರು. ತದನಂತರ, ಬಿಜಾಪುರದ ಸೇನಾಧಿಪತಿಯಾದ ರಣದುಲ್ಲ ಖಾನ್ ರವರಿಂದ ವಶಪಡಸಿಕೊಂಡರು. ನಂತರ  ಮಲಿಕ್ ಹುಸ್ಸೇನ್  ಶಿರಾ ರಾಜ್ಯಪಾಲರಾಗಿ ನೇಮಕಗೊಂಡರು. ಮೊಘಲ್ ದೊರೆಯಾದ ಅವರಂಗಜೇಬ್ ಬೀಜಾಪುರನ್ನು ವಶಪಡಿಸಿಕೊಂಡ ನಂತರ  ದಿಲಾವರ್ ಖಾನ್ ಶಿರಾ ರಾಜ್ಯಪಾಲಾರಾಗಿ ನೇಮಕಗೊಂಡರು.

ಅಲ್ಲಿ ಇವರು ಸುಮಾರು ಪ್ರಸಿದ್ದವಾದ ಕಟ್ಟಡಗಳು ಮತ್ತು ಸುಂದರವಾದ  ಗಾರ್ಡನ್ ಗಳು ನಿರ್ಮಿಸಿದರು, ಅದು ಬೆಂಗಳೂರಿನ ಲಾಲ್ ಬಾಗ್ ಗಾರ್ಡನ್ ಮತ್ತು ಮೈಸೂರಿನ ಶ್ರೀರಂಗಪಟ್ಟಣದ ಹೋಲಿಕೆಯಂತೆ ಶಿರಾದಲ್ಲಿ  ಜುಮ್ಮ ಮಸ್ಜಿದ್ ಮತ್ತು  ಮಲಿಕ್ ರೀಹಾನ್ ಕೋಟೆ ಸಂಗೆ ಮರ್ ಮರ್ ಕಲ್ಲಿನಲ್ಲಿ ನಿರ್ಮಿಸಿರುತ್ತಾರೆ. 

ತುರುವೇಕೆರೆ ತುರುವೇಕೆರೆ

ಇದು ಬೆ೦ಗಳೂರಿನಿ೦ದ 132 ಕಿ.ಮಿ. ದೂರದಲ್ಲಿದೆ.  ಬೆ೦ಗಳೂರಿನ ಮೆಜಸ್ಟಿಕ್ ಬಸ್ ನಿಲ್ದಾಣದಿ೦ದ ಪ್ರತಿ ಅರ್ದ ತಾಸಿಗೊಮ್ಮೆ ಕೆ.ಏಸ್.ಆರ್.ಟಿ.ಸಿ. ಬಸ್ ಗಳಿವೆ. ಹಾಗೂ ಬಾಣಸಂದ್ರ ರೈಲ್ವೆ ನಿಲ್ದಾಣದಿಂದ 12 ಕಿ.ಮಿ ದೂರವಿದೆ. ಸುಲುಭವಾಗಿ ತುಮಕೂರು ಮತ್ತು ಬೆಂಗಳೂರುನಿದ ಬಸ್ಸುಗಳಿವೆ.

ತುರುವೇಕೆರೆ ಒಂದು ಕಾಲದಲ್ಲಿ  ಇತಿಹಾಸಿಕ ಊರು ಇದರ ಹೆಸರು ಅಗ್ರಾಹರ 13 ನೇ ಶತಮಾನದಲ್ಲಿ ಬ್ರಾಹ್ಮಣ್ಣರಿಗೆ ಸರ್ಕಾರದಿಂದ ಉಚಿತವಾಗಿ ಊರು  ಮಂಜೂರಾಗಿರುತ್ತದೆ. ಈ ತಾಲ್ಲೂಕಿನಲ್ಲಿ ಐತಿಹಾಸಿಕ ಹೊಯ್ಸಳರ ಕಾಲದ ಗಂಗಾಧರೇಶ್ವರ ದೇವಸ್ಥಾನವಿದೆ. ತುರುವೇಕೆರೆ ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿನ ಶ್ರೀ ಬೇಟೆರಾಯಸ್ವಾಮಿ ದೇವಸ್ಥಾನ, ಶ್ರೀ ಗಂಗಾಧರೇಶ್ವರ ದೇವಸ್ಥಾನ, ಮೂಲೇ ಶ್ರೀ ಶಂಕರೇಶ್ವರ ದೇವಸ್ಥಾನ, ಶ್ರೀ ಚನ್ನಿಗರಯಸ್ವಾಮಿ ದೇವಸ್ಥಾನಗಳು ಹೊಯ್ಸಳರ ಕಾಲದ ದೇವಸ್ಥಾನಗಳಾಗಿದ್ದರೆ ಊರ ಗ್ರಾಮ ದೇವತೆ ಶ್ರೀ ಉಡುಸಲಮ್ಮ ದೇವಸ್ಥಾನ, ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳಿಂದ ತುರುವೇಕೆರೆ ಪ್ರಖ್ಯಾತವಾಗಿದೆ. ಸಮೀಪದ ಬದರಿಕಾಶ್ರಮ ಪ್ರವಾಸಿಗರನ್ನು ಆಕರ್ಷಿಸುತ್ತದೆ. ತುರುವೇಕೆರೆಯಲ್ಲಿನ ಶ್ರೀ ಅಚಲಾನಂದರು ಸ್ಥಾಪಿಸಿದ್ದರೆನ್ನಲಾದ ನೂರಒಂದು ದೇವರ ದೇವಸ್ಥಾನ ಸಾಲಿಗ್ರಾಮಗಳ ದೇವಸ್ಥಾನವಾಗಿದೆ. ಸಮೀಪದ ಮಲ್ಲಾಘಟ್ಟ ಕೆರೆಯು ಪ್ರವಾಸಿ ತಾಣವಾಗಿದೆ.

ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ
ಯಡಿಯೂರು

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನಲ್ಲಿರುವ, ಬೆಂಗಳೂರಿನಿಂದ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸುಮಾರು 100 ಕಿ.ಮಿ. ದೂರದಲ್ಲಿರುವ ಯಡೆಯೂರು ತೀರ್ಥಕ್ಷೇತ್ರ ದರ್ಶನಾರ್ಥಿಗಳಿಗೆ, ಲಿಂಗಾಯತ ಸಮುದಾಯಕ್ಕೆ ಮುಖ್ಯವಾಗಿ, ಪ್ರಮುಖವಾದ ಯಾತ್ರಾಸ್ಥಳ.

ಇಲ್ಲಿ ಶ್ರೀ ತೋಟದ ಸಿದ್ಧಲಿಂಗಯ್ಯನವರು ಪ್ರಸಿದ್ಧವಾದ ಬರಹಗಾರರು ಮತ್ತು ಉಪಾಧ್ಯಾಯರು ವೀರಶೈವರು ಇವರ ಸಮಾಧಿಯು ಸಹ ದೇವಸ್ಥಾನಲ್ಲಿದೆ ಈ ದೇವಸ್ಥಾನ  ಡ್ರಾವಿಡಿಯನ್ ಮಾದರಿಯಲ್ಲಿದೆ. ಈ ದೇವಸ್ಥಾನದಲ್ಲಿ  ಆರು  ಕಲ್ಲು ಚಕ್ರದ ರಥವಿದೆ (Processrion Car). ವರ್ಷದಲ್ಲಿ ಒಂದು ಸಾರಿ ಮಾರ್ಚ್ ಮತ್ತು ಏಪ್ರಿಲ್ ಮಧ್ಯದಲ್ಲಿ ರಥ ಹಬ್ಬ ಇಡಿ ರಾತ್ರ ಆಗುತ್ತದೆ.

ಸೀಬಿ ಸೀಬಿ

ತುಮಕೂರು ಜಿಲ್ಲೆ, ಶಿರಾ ರಸ್ತೆ , ಬೆಂಗಳೂರಿನಿಂದ ಶಿರಾ ಹೆದ್ದಾರಿಯಲ್ಲಿ ಸುಮಾರು 30 ಕಿ.ಮಿ. ದೂರದಲ್ಲಿರುವ ಊರು ಸೀಬಿ. ಸದರಿ ಗ್ರಾಮದಲ್ಲಿ ಸುಂದರವಾದ  ಶ್ರೀ ನರಸಿಂಹಸ್ವಾಮಿ ದೇವಸ್ಥಾನವಿದೆ ಇದು  ತೀರ್ಥಕ್ಷೇತ್ರ ದರ್ಶನಾರ್ಥಿಗಳಿಗೆ ಚನ್ನಾಗಿದೆ. ಈ ದೇವಸ್ಥಾನದ ತೆರೆಕೋಟೆ ಮತ್ತು  Frescoes ಗಳು  18ನೇ ಶತಮಾನದ್ದು.

ಚನ್ನರಾಯನ ದುರ್ಗ

ಚನ್ನರಾಯನದುರ್ಗ ತುಮಕೂರು ಜಿಲ್ಲೆ ಮತ್ತೊಂದ ಪ್ರಸಿದ್ದ ತಾಣಮಧುಗಿರಿಯ  ಸಮೀಪದ ಪುಟ್ಟ ಹಳ್ಳಿ ಸಮುದ್ರಮಟ್ಟದಿಂದ ಮೂರು ಮುಕ್ಕಾಲು ಸಾವಿರ ಅಡಿ ಎತ್ತರದಲ್ಲಿರುವ ಇಲ್ಲಿ ಕೋಟೆಯನ್ನು ಮೊಟ್ಟಮೊದಲಿಗೆ ಕಟ್ಟಿದವರು ಮಧುಗಿರಿಯ ಪಾಳೆಗಾರ ವಂಶಕ್ಕೆ ಸೇರಿದ ಚನ್ನಪ್ಪ ಗೌಡರು 17ನೇ ಶತಮಾನದಲ್ಲಿ  ಕಟ್ಟಿಸಿದರು ಎಂದು ಇತಿಹಾಸ ಹೇಳುತ್ತದೆ.

ಚನ್ನರಾಯದುರ್ಗ ಬಹಳಷ್ಟು ಕಾಲ ಈ ಕೋಟೆ  ಮಧುಗಿರಿ ಪಾಳ್ಯರ ವಶದಲ್ಲಿತ್ತು.  ನಂತರ  ಮರಾಠರು ವಶಮಾಡಿಕೊಂಡರು. ಬಹಳ ವರ್ಷ ಕಳೆದ ನಂತರ ಮೈಸೂರಿನ ಚಿಕ್ಕ ದೇವರಾಯ ವಡಿಯರ್ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ  ಭಾಗವಾಯಿತು. ಬೆಟ್ಟದ ಕೆಳಗಡೆ  ಮುರಾರಿ ಮಾತ ಮನೆಯೆಂದುವಿದೆ.

ದೇವರಾಯನ ದುರ್ಗ

ತುಮಕೂರಿನಿಂದ 16 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ , ದೇವರಾಯನದುರ್ಗ ಕಾಡು ಗೋಚರಿಸುತ್ತದೆ.ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ.ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8ನೆ ಶತಮಾನದಲ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಲಾಯವಿದೆ. ಹಾಗೆ ಸಮಿಪದಲ್ಲಿ "ನಾಯಕನ ಕೆರೆ" ಎಂಬ ಸುಂದರ ಮತ್ತು ಮನೊಹರವಾದ ಕೆರೆ ಇದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವಾಲಯಗಳಿವೆ,ಹಳೆಯ ಕೊಟೆ,ಸೂರ್ಯಾಸ್ತ ನೊಡಲು ಸುಂದರಾವಾದ ಜಾಗ ಕೂಡ ಇದೆ.ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.ದೇವರಾಯನ ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ.ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ ಹುಲಿ ಕೂಡ ಪತ್ತೆಯಾಗಿದೆ. ದುರ್ಗದ ಮೇಲೆ ಸರ್ಕಾರದ ಪ್ರವಾಸಿ ಬಂಗಲೆಗಳಿವೆ. ಬೆಟ್ಟದ ತುದಿಯಿಂದ ನಿಂತು ನೋಡಿದರೆ ಸುಮಾರು 15 ಕಿ.ಮೀ. ದೂರದಲ್ಲಿರುವ ಶಿವಗಂಗೆ ಬೆಟ್ಟ ಕಾಣುತ್ತದೆ. ಸುತ್ತಲೂ ಹತ್ತಾರು ಕೆರೆಗಳು ನೀರಿನಿಂದ ತುಂಬಿರುವುದೂ ಸಹ ಗೋಚರಿಸುತ್ತದೆ. ಇಲ್ಲಿನ ನರಸಿಂಹ ದೇವರ ಜಾತ್ರೆಯು ಬಹಳ ಪ್ರಸಿದ್ದ. ಪ್ರತಿ ವರ್ಷವೂ ಇಲ್ಲಿ ನೆಡೆಯುವ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹತ್ತಿರದಲ್ಲಿರುವ ದುರ್ಗದ ಹಳ್ಳಿಯಲ್ಲಿರುವ ಶ್ರೀ ವಿದ್ಯಾಶಂಕರ ಸ್ವಾಮಿಯ ದೇವಾಲಯವೂ ಬಹಳ ಸುಂದರವಾಗಿದೆ. ಈ ದೇವಾಲಯವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ.

ಕೈದಾಳ

ಕೈದಾಳ ಗ್ರಾಮವು ತುಮಕೂರಿನಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಇಲ್ಲಿ ಬಹಳ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವ ದೇವಾಲಯವಿದೆ. ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 6 ಕಿ.ಮೀ ಚಲಿಸಿದರೆ ಗಣೇಶನಿಗೆ ಪ್ರಸಿದ್ದವಾದ ಗೂಳೂರು ಸಿಗುತ್ತದೆ. ಗೂಳೂರಿನಿಂದ ಬಲಕ್ಕೆ ತಿರುಗಿ 1 ಕಿ.ಮೀ ಚಲಿಸಿದರೆ ಕೈದಾಳ ತಲುಪಬಹುದು. ತುಮಕೂರು ಜಿಲ್ಲೆಯಲ್ಲಿನ ಕೈದಾಳ, ಈ ಹೊಯ್ಸಳ ಶೈಲಿಯ ದೇವಸ್ತಾನಗಳ ಪಟ್ಟಿಗೆ ಸೇರುವ ಮತ್ತೊಂದು ಹಳ್ಳಿ. ತುಮಕೂರು-ಕುಣಿಗಲ್ ರಸ್ತೆಯಲ್ಲಿ ಸಿಗುವ ಗೂಳೂರಿನಲ್ಲಿ ಬಲಕ್ಕೆ ತಿರುಗಿ ಒಂದು ಕಿ.ಮೀ. ಚಲಿಸಿದರೆ ಕೈದಾಳ ಸಿಗುತ್ತದೆ. ಹೊಯ್ಸಳ ಶೈಲಿಯ ಶಿಲಾಬಾಲಿಕೆ-ಕೆತ್ತನೆಗಳನ್ನು ಹುಡುಕಿ ಇಲ್ಲಿಗೆ ಬಂದರೆ ನಿರಾಶೆ ಖಂಡಿತ. ಹೊರಗಿನಿಂದ ಸಾಧಾರಣ ದೇಗುಲದಂತೆ ಕಂಡರೂ, ಗರ್ಭಗುಡಿಯಲ್ಲಿರುವ ಚನ್ನಕೇಶವ ವಿಗ್ರಹದ ಕೆತ್ತನೆ ಕಣ್ಸೆಳೆಯುತ್ತದೆ. ಸುಮಾರು 6 ಅಡಿ ಎತ್ತರವಿರುವ ಕಪ್ಪು ಶಿಲೆಯ ಚನ್ನಕೇಶವ ಸ್ವಾಮಿ ಎಲ್ಲ ದೇವಸ್ತಾನಗಳಂತೆ ಪೂರ್ವಾಭಿಮುಖವಾಗಿರುವ ಬದಲು, ಇಲ್ಲಿ ಪಶ್ಚಿಮಾಭಿಮುಖವಾಗಿದೆ. ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದ ಕೆತ್ತನೆ ಶಿಲ್ಪಿಯ ಕರಕುಶಲತೆಯನ್ನು ಎತ್ತಿ ತೋರುತ್ತದೆ. ಪುರಾಣ, ದಂತಕಥೆಗಳ ಪ್ರಕಾರ ಕೈದಾಳ (ಮೊದಲಿಗೆ ಕ್ರೀಡಿಕಾಪುರ) ಜಕಣಾಚಾರಿ ಹುಟ್ಟಿದ ಸ್ಥಳ. ತಾನು ಕೆತ್ತಿದ ಬೇಲೂರಿನ ಚನ್ನಕೇಶವ (ಕಪ್ಪೆ ಚನ್ನಿಗರಾಯ) ವಿಗ್ರಹದಲ್ಲಿನ ದೋಷಕ್ಕಾಗಿ ತನ್ನ ಕೈಯನ್ನು ಬಲಿ ಕೊಟ್ಟ ಜಕಣಾಚಾರಿ, ದೈವೇಚ್ಛೆಯಂತೆ ತನ್ನ ಹುಟ್ಟೂರಿನಲ್ಲಿ ಮತ್ತೊಂದು ದೇವಸ್ಥಾನ ನಿರ್ಮಿಸಿ ಕೈ ಮರಳಿ ಪಡೆಯುತ್ತಾನೆ. ಕೈ ಮರಳಿ ಬಂದಿದ್ದರಿಂದ ಕ್ರೀಡಿಕಾಪುರ ಮುಂದೆ ಕೈದಾಳವಾಗಿ ಮಾರ್ಪಟ್ಟಿತು ಎನ್ನಲಾಗುತ್ತದೆ. ಜಕಣಾಚಾರಿಯ ಜೀವನದ ಕೊನೆಯ ದಿನಗಳಲ್ಲಿ ಕೈದಾಳದ ದೇವಸ್ತಾನವನ್ನು ಕಟ್ಟಲಾಯಿತೆಂದೂ, ಅದರಿಂದಾಗಿ ದೇವಸ್ಥಾನದ ಹೊರಗಿನ ಕೆತ್ತನೆ ನಡೆಯಲಿಲ್ಲವೆಂದು ಪ್ರತೀತಿ. ಒಂದು ದಂತಕಥೆ ಈ ರೀತಿಯದ್ದಾರೆ, ಕೆಲವರ ತರ್ಕದ ಪ್ರಕಾರ, ಜಕಣಾಚಾರಿ ಎನ್ನುವ ಶಿಲ್ಪಿ ಬದುಕಿರಲೇ ಇಲ್ಲ ಎನ್ನುವುದು.

 
ಮಧುಗಿರಿ

ಮಧುಗಿರಿ ಬೆಟ್ಟ ತುಮಕೂರು ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಥಳ. ಇದು ಏಷ್ಯಾ ಖಂಡದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟ ಎಂಬ ಖ್ಯಾತಿ ಪಡೆದಿದೆ.ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಸುತ್ತಲಿನ ಪ್ರದೇಶವು ಗಣಿಗಾರಿಕೆಯ ಪ್ರಮುಖ ತಾಣವಾಗಿದೆ. ಬೆಟ್ಟದ ಮೇಲೆ ಕೋಟೆಯಿದೆ. ಬೆಟ್ಟ 3930 ಅಡಿ ಎತ್ತರವಿದ್ದು, 121 ಎಕರೆ ವಿಸ್ತ್ರೀರ್ಣವಿದೆ. ಬೆಟ್ಟದ ಬುಡದಲ್ಲಿ ನಾಲ್ಕು ಗವಿಗಳಿವೆ. ಮಧುಗಿರಿ 1763ರಲ್ಲಿ ವಿಜಯನಗರದ ರಾಜಧಾನಿವಾಗಿತ್ತು, ಮಧುಗಿರಿಯಲ್ಲಿ ಒಂದು ಪ್ರಸಿದ್ದವಾದ ಮಲ್ಲಿನಾಥ ಬಸ್ತಿ ಜೈನ್ ದೇವಸ್ಥಾನವಿದೆ ಹಾಗೂ ಮಲ್ಲೇಶ್ವರ ಮತ್ತು ವೆಂಕಟೇಶ್ವರ ದೇವಸ್ಥಾನಗಳಿವೆ ಎರಡು ದೇವಸ್ಥಾನದಲ್ಲಿಯೂ ದೊಡ್ಡ ದೊಡ್ಡ ಕಂಭಗಳಿವೆ ಅದರ ಮೇಲೆ ದೀಪಗಳಿವೆ. ಮಧುಗಿರಿ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಹೆಸರು ಅಲ್ಲಿಯ ಬೆಟ್ಟದಲ್ಲಿ ಸಿಗುತ್ತಿದ್ದ ಜೇನಿನಿಂದ (ಮಧು) ಬಂದಿದೆ. ಇದು ಹಿಂದೆ ಮೈಸೂರು ರಾಜರ ಒಡೆತನದಲ್ಲಿ ಒಂದು ಮುಖ್ಯ ಠಾಣೆಯಾಗಿತ್ತು ಮತ್ತು ಸಿದ್ದನಾಯಕನೆಂಬ ಸೈನ್ಯಾಧಿಕಾರಿಯು ಆಡಳಿತ ಮಾಡುತಿದ್ದನು. ಬೆಟ್ಟದಲ್ಲಿ ಈಗಲೂ ಒಂದು ಕೋಟೆ ಇದೆ. ಇಲ್ಲಿ ಇರುವ ದಂಡಿನ ಮಾರಮ್ಮ ದೇವಿ ಶಕ್ತಿ ದೇವತೆ ಬಹಳ ಪ್ರಸಿದ್ದಿ. ಹಿಂದೆ ಇಲ್ಲಿನ ಬೆಟ್ಟದಲ್ಲಿ ಸೀತಾಫಲ ಮತ್ತು ದಾಳಿಂಬೆ ಹಣ್ಣುಗಳು ಬಹಳ ಬೆಳೆಯುತ್ತಿದ್ದವು. ಈ ಪ್ರದೇಶದ ಪ್ರಮುಖ ಬೆಳೆಗಳು ಕಡಲೇಕಾಯಿ, ರಾಗಿ, ಮಾವು ಹಾಗೂ ಜೋಳ. ಇಲ್ಲಿ ರೇಶಿಮೆ ಮತ್ತು ತೆಂಗು ಕೂಡ ಬೆಳೆಯಲಾಗುತ್ತದೆ. ಮಧುಗಿರಿಯ ಕೋಟೆಯಿಂದ ಎಡಕ್ಕೆ ಹೊದರೆ ಸಿದ್ದರಕಟ್ಟೆ ಎಂಬ ಒಂದು ಸಣ್ಣ ಕೆರೆ ಇದೆ ಅದು ನೊಡಲು ತುಂಬ ಚೆನ್ನಾಗಿದೆ. ಹತ್ತಿರವಾದ ರೈಲು ನಿಲ್ದಾಣವೆಂದರೆ ತುಮಕೂರು ನಿಲ್ದಾಣ, ಸುಲಭವಾಗಿ ತುಮಕೂರು ಮತ್ತು ಬೆಂಗಳೂರಿನಿಂದ ಬಸ್ಸುಗಳಿವೆ.

ಮಾರ್ಕೋನಹಳ್ಳಿ

ಕುಣಿಗಲ್ ನಿಂದ 25 ಕಿ.ಮಿ.ದೂರದಲ್ಲಿ ಮಾರ್ಕೋನಹಳ್ಳಿ ಇದೆ. ಇಲ್ಲಿ 1939ನೇ ಸಾಲಿನಲ್ಲಿ ಷಿಂಷಾ ನದಿಯ ಮೇಲೆ ಅಣೆಕಟ್ಟು ನಿರ್ಮಿಸಿದರು. 1942ನೇ ಸಾಲಿನಲ್ಲಿ ಈ ಅಣೆಕಟ್ಟಿನಿಂದ ರೈತರಿಗೆ ತುಂಬ ಅನುಕೂಲವಾಯಿತು.  ಮಾರ್ಕೋನಹಳ್ಳಿಗೆ ಸುಲಭವಾಗಿ ಕುಣಿಗಲ್ ನಿಂದ ಬಸ್ಸುಗಳಿವೆ.

 

ಪಾವಗಡ

ಪಾವಗಡ ಕ್ಕೆ “ಹಾವು ಬೆಟ್ಟ” ಎಂದು ಕರೆಯುತ್ತಾರೆ. 1405ರಲ್ಲಿ ಇಲ್ಲಿನ ಕೋಟೆಯು ವಿಜಯನಗರ ರಾಜರಿಂದ ನಿರ್ಮಾಣವಾಯಿತು. ಇವರಿಗೆ ಈ ಕೋಟೆ ಕೇಂದ್ರವಾಗಿತ್ತು. ಈ ಬೆಟ್ಟವು 3000ಅಡಿ ಉದ್ದವಿದೆ. ರತ್ನಗಿರಿ, ನಿಡ್ಗಲ್ ರಾಯದುರ್ಗ ರವರು ವಶಪಡಿಸಿಕೊಂಡಿದ್ದರು. ಹಾಗೂ ಹೈದರ್ ಅಲಿ ಕ್ಕಿಂತ ಮುಂಚೆ ಮರಾಠರು ಈ ಕೋಟೆಯನ್ನು ದಾಳಿಮಾಡಿದ್ದರು. ನಂತರ ಈ ಕೋಟೆ ಮರಾಠರು ಮತ್ತು ಇಂಗ್ಲೀಷ್ ಇಬ್ಬರಿಗೂವಾಯಿತು. ತದನಂತರ ಒಪ್ಪಂದದ ಮೇರೆಗೆ ಟಿಪು ಸುಲ್ತಾನ್ ಕೋಟೆಯನ್ನು ವಶಪಡಿಸಿಕೊಂಡರು. ಈ ಪ್ರದೇಶಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಹಿಂದೆ ಈ ಪ್ರದೇಶವೆಲ್ಲಾ ಗೋಂಡಾರಣ್ಯಕ್ಕೆ ಸೇರಿತ್ತೆಂದು, ಪುರಾಣದಲ್ಲಿ ಉಲ್ಲೇಖನವಿದೆ. ಪಾವಗಡ ಈ ಹೆಸರು ಬರಲು ಇಲ್ಲಿನ ಬೆಟ್ಟವು ಹಾವಿನ ಆಕಾರದಿಲ್ಲಿ ಇರುವುದೇ ಕಾರಣವೆಂದು ತಿಳಿದು ಬರುತ್ತದೆ. ಹಿಂದೆ ಇದಕ್ಕೆ ಪಾಮುಕೊಂಡ ಎಂದು ಹೆಸರಿದ್ದು ನಂತರ ಪಾವುಕೊಂಡ, ಪಾವುಕೊಡವಾಗಿ ಈ ರೀತಿಯಲ್ಲಿ ಆಡು ಭಾಷೆಯಲ್ಲಿ ಬದಲಾವಣೆ ಹೊಂದಿ ಪಾವಗಡ ಆಗಿದೆ. ನಗರದಲ್ಲಿ ಶನಿ ಮಹಾತ್ಮ ದೇವರ ದೇವಸ್ಥಾನವಿದ್ದು ಸುತ್ತಮುತ್ತಲೂ ಬಹಳ ಪ್ರಸಿದ್ದಿ ಪಡೆದಿದೆ. ತಾಲ್ಲೂಕಿನಲ್ಲಿ ನಿಡಗಲ್ ಬೆಟ್ಟ,ನಾಗಲಮಡಿಕೆಯ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಅಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿ ಪ್ರಸಿದ್ದಿ ಪಡೆದಿವೆ. ಇಲ್ಲಿನ ಬಹು ಮುಖ್ಯದೇವರು ಅಕ್ಕಮ್ಮನ ದೇವಸ್ಥಾನ. ಈ ದೇವರಿಗೆ ನಾಗಪ್ಪ ಪೂಜೆಮಾಡುತ್ತಿದರು. ಪಾವಗಡ ತಾಲ್ಲೂಕು ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು ೧೫೦ ಕಿ.ಮೀ.ದೂರವಿದ್ದು, ನಗರದಿಂದ ನೇರ ಬಸ್ ಸಂಪರ್ಕ ಹೊಂದಿದೆ.

ಅರಳುಗುಪ್ಪೆ

ಈ ತಾಲ್ಲೂಕಿನಲ್ಲಿ ಐತಿಹಾಸಿಕ ಹೊಯ್ಸಳರ ಕಾಲದ ಗಂಗಾಧರೇಶ್ವರ ದೇವಸ್ಥಾನವಿದೆ. ತುರುವೇಕೆರೆ ಒಂದು ಇತಿಹಾಸ ಪ್ರಸಿದ್ಧಸ್ಥಳ. ಇಲ್ಲಿನ ಶ್ರೀ ಬೇಟೆರಾಯಸ್ವಾಮಿ ದೇವಸ್ಥಾನ, ಶ್ರೀ ಗಂಗಾಧರೇಶ್ವರ ದೇವಸ್ಥಾನ, ಮೂಲೇ ಶ್ರೀ ಶಂಕರೇಶ್ವರ ದೇವಸ್ಥಾನ, ಶ್ರೀ ಚನ್ನಿಗರಯಸ್ವಾಮಿ ದೇವಸ್ಥಾನಗಳು ಹೊಯ್ಸಳರ ಕಾಲದ ದೇವಸ್ಥಾನಗಳಾಗಿದ್ದರೆ ಊರ ಗ್ರಾಮ ದೇವತೆ ಶ್ರೀ ಉಡುಸಲಮ್ಮ ದೇವಸ್ಥಾನ, ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳಿಂದ ತುರುವೇಕೆರೆ ಪ್ರಖ್ಯಾತವಾಗಿದೆ. ಸಮೀಪದ ಬದರಿಕಾಶ್ರಮ ಪ್ರವಾಸಿಗರನ್ನು ಆಕರ್ಷಿಸುತ್ತದೆ. ತುರುವೇಕೆರೆಯಲ್ಲಿನ ಶ್ರೀ ಅಚಲಾನಂದರು ಸ್ಥಾಪಿಸಿದ್ದರೆನ್ನಲಾದ ನೂರಒಂದು ದೇವರ ದೇವಸ್ಥಾನ ಸಾಲಿಗ್ರಾಮಗಳ ದೇವಸ್ಥಾನವಾಗಿದೆ. ಸಮೀಪದ ಮಲ್ಲಾಘಟ್ಟ ಕೆರೆಯು ಪ್ರವಾಸಿ ತಾಣವಾಗಿದೆ.

ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ

ಇದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಇರುವ ಒಂದು ಸಣ್ನ ಗ್ರಾಮ. ಇಲ್ಲಿ ಇರುವ ಲಕ್ಷ್ಮಿ ದೇವಸ್ಥಾನವು ಧಾರ್ಮಿಕ ಶ್ರದ್ದಾ ಕೇಂದ್ರವಾಗಿದೆ. ಈ ಗ್ರಾಮವು ತನ್ನಲ್ಲಿ ಇರುವ ಲಕ್ಷ್ಮಿ ದೇವಸ್ಥಾನದಿಂದಾಗಿ ಚಿರಪರಿಚಿತವಾಗಿದೆ. ಗ್ರಾಮದ ಕಮಲಮ್ಮ ಎಂಬುವವರು ಈ ದೇವಾಲಯವನ್ನು ನಿರ್ಮಿಸಿದರು ಹಾಗು ಅದರ ಉಸ್ತುವಾರಿ ವಹಿಸಿಕೊಂಡಿದ್ದರು. ಅವರ ಮರಣಾ ನಂತರ ಅವರ ಪುತ್ರರಾದ ಪ್ರಸನ್ನರವರು ಆಡಳಿತ ನೋಡಿಕೊಳ್ಳುತ್ತಿದ್ದಾರೆ. ಈ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗು ಭಾನುವಾರಗಳಂದು ವಿಶೇಷ ಪೂಜೆ ಇರುತ್ತದೆ. ದೇವಾಲಯದ ವತಿಯಿಂದ ಇಲ್ಲಿ ಪ್ರತಿದಿನ ಅಪರಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದವರು ಇಲ್ಲಿ ಒಂದು ಕಲ್ಯಾಣ ಮಂಟಪವನ್ನು ನಿರ್ಮಿಸಿದ್ದಾರೆ. ಸಾರ್ವಜನಿಕರು ಅಗತ್ಯ ಹಣವನ್ನು ನೀಡಿ ಇದರ ಉಪಯೋಗ ಪಡೆದುಕೊಳ್ಳಬಹುದು. ಇಲ್ಲಿ ನೀರಾವರಿ ಮತ್ತು ಮೀನುಗಾರಿಕೆಗೆ ಒಂದು ಸಣ್ಣ ಜಲಾಶಯವನ್ನು ನಿರ್ಮಿಸಲಾಗಿದೆ. ಮಳೆ ಮತ್ತು ಅಕ್ಕಿ ರಾಂಪುರ ಕೆರೆಯ ಎಚ್ಚುವರಿ ನೀರು ಗೊರವನಹಳ್ಳಿ ಕೆರೆಗೆ ಆಧಾರ. ಈ ಕೆರೆಯು ನೂರಾರು ಎಕರೆ ಗದ್ದೆ ಹಾಗು ತೋಟಗಳಿಗೆ ನೀರಾವರಿಯ ಅಧಾರವಾಗಿದೆ.

ನಾಮದ ಚಿಲುಮೆ

ಇದು ದೇವರಾಯನ ದುರ್ಗಕ್ಕೆ ಹೋಗುವ ದಾರಿಯಲ್ಲಿರುವ ನಾಮದ ಚಿಲುಮೆಗೆ ಕೇವಲ 3 ಕಿ.ಮೀ ದೂರದಲ್ಲಿದೆ. ಒಮ್ಮೆ ರಾಮನಿಗೆ ಹಣೆಗೆ ತಿಲಕವಿಡುವ ಸಂದರ್ಭ ಬಂದಿತು. ನೀರಿಗಾಗಿ ಸುತ್ತಲೂ ನೋಡಿದರೂ ಎಲ್ಲಿಯೂ ನೀರು ಸಿಗಲೇ ಇಲ್ಲ. ಆಗ ಆ ಸ್ಥಳದಲ್ಲೇ ಬಾಣ ಹೂಡಿ ಒಂದು ಬಂಡೆಯ ಮೇಲೆ ಬಿಟ್ಟಾಗ, ಬಾಣ ಒಳಹೊಕ್ಕು ರಂಧ್ರವನ್ನು ಕೊರೆದು ಅಲ್ಲಿ ನೀರಿನ ಬುಗ್ಗೆ ಚಿಮ್ಮಿತು. ಆ ನೀರನ್ನು ತೆಗೆದುಕೊಂಡು ರಾಮ ತನ್ನ ಹಣೆಗೆ ನಾಮವನ್ನು ಧರಿಸಿದರಂತೆ. ಹಾಗಾಗಿ ಈ ಚಿಲುಮೆಗೆ ನಾಮದ ಚಿಲುಮೆಎಂಬ ಹೆಸರು ಬಂದಿದೆ. ಕಡು ಬೇಸಿಗೆಯಲ್ಲೂ ಇಲ್ಲಿ ನೀರು ಚಿಮ್ಮುತ್ತಲೇ ಇರುವುದು ವಿಶೇಷ. ನಾಮದ ಚಿಲುಮೆಯಲ್ಲಿ ಒ೦ದು ಸಣ್ಣ ಮ್ರುಗಾಲಯವಿದ್ದು ಅದರಲ್ಲಿ ಜಿ೦ಕೆ, ಕವಡೆ ಇತ್ಯಾದಿ ಪ್ರಾಣಿಗಳಿವೆ. ತ೦ಪಾದ ಗಾಳಿ, ಉತ್ತಮ ಮರಗಳು, ತು೦ಟ ಕೊತಿಗಳು, ಬಣ್ಣ ಬಣ್ಣದ ಪಕ್ಶಿಗಳಿರುವ ಇದು ವಾರಾ೦ತ್ಯ ಕಳೆಯಲು ಇದು ಉತ್ತಮ ಸ್ಠಳ.

ತುಮಕೂರಿನ  ರೈಲು ನಿಲ್ದಾಣ ಹತ್ತಿರವಿದೆ.  ದೇವರಾಯದುರ್ಗಕ್ಕೆ ತುಮಕೂರು ಮತ್ತು ಬೆಂಗಳೂರು ನಿಂದ ಸುಲುಭವಾಗಿ ಬಸ್ಸುಗಳಿವೆ.

 

 

ಸಿದ್ಧರಬೆಟ್ಟ

ಸಿದ್ಧರಬೆಟ್ಟ ಅಥವಾ ಬೂದಗವಿ ಬೆಟ್ಟವು ಕೊರಟಗೆರೆ ತಾಲ್ಲೂಕಿನಲ್ಲಿದ್ದು ಪ್ರವಾಸಿಗರಿಗೆ ಪ್ರೆಕ್ಷಣೀಯ ಮತ್ತು ಧಾರ್ಮಿಕ ಕ್ಷೇತ್ರವೆನಿಸಿಕೊಂಡಿದ್ದು ವಿವಿಧ ಔಷಧಿ ಗಿಡಮೂಲಿಕೆಗಳಿಗೆ ಪ್ರಸಿದ್ಧವಾಗಿರುತ್ತದೆ. ಸಿದ್ಧರ ಬೆಟ್ಟವು ಪೌರಾಣಿಕ ಪ್ರತೀತಿಯಂತೆ ಹನುಮಂತನು ಸಂಜೀವಿನಿ ಪರ್ವತವನ್ನು ಒಯ್ಯುವಾಗ ಉದುರಿದ ಗಿಡಮೂಲಿಕೆಗಳು ಈ ಸುವರ್ಣಗಿರಿಯಲ್ಲಿ ಬೆಳೆದವು ಎನ್ನುವ ನಂಬಿಕೆ. ಶ್ರೀರಾಮನಿಂದ ಶಾಪಗ್ರಸ್ಥನಾದ ಕಾಕಾಸುರನು ಮತ್ತೆ ಕ್ಷಮಿಸಲ್ಪಟ್ಟನೆಂದು ಆತನ ಅಪ್ಪಣೆಯಂತೆ ಈ ಪ್ರದೇಶದಲ್ಲಿ ಸುಳಿಯದಂತೆ ನಿಯಮಬದ್ಧನಾದನೆಂದು ವದಂತಿ ಇದೆ. ಇದಕ್ಕೆ ನಿತ್ಯ ಸಾಕ್ಷಿಯಾಗಿರುವಂತೆ ಇಂದಿಗೂ ಸಹ ಈ ಬೆಟ್ಟದಲ್ಲಿ  ಕಾಗೆಗಳ ಸಂಚಾರವಿಲ್ಲ.

×
ABOUT DULT ORGANISATIONAL STRUCTURE PROJECTS